Saturday, July 13, 2019

‘ಸುಧಾಮ’ದಲ್ಲಿ ಹೇಮಂತನ ದಿಂಞಿಣ



ದಶಂಬರ ತಿಂಗಳು ಕಾಲಿಟ್ಟರೆ ಸಾಕು, ಉಪ್ಪಿನಂಗಡಿ ಪಂಜಾಳದಸುಧಾಮಮನೆ ನೆನಪಾಗುತ್ತದೆ! ಹೇಮಂತ ಹಬ್ಬ ಕರೆಯುತ್ತದೆ. ಅಂದು ಅಕ್ಷರಗಳು ನಲಿಯುತ್ತವೆ! ಮನೆಮಂದಿಯ ಕಲೆ, ಸಾಹಿತ್ಯಗಳ ಖುಷಿಗಳು ಗ್ರಾಸ ಒದಗಿಸುತ್ತದೆ. ಆಪ್ತೇಷ್ಟರ ನೆನಪಿನ ಮೆಲುಕುಗಳು ವಿನಿಮಯವಾಗುತ್ತದೆ. ಶಿಷ್ಟಲೋಕವೊಂದು ಇಳಿದು ಬರುತ್ತದೆ.  

ವಿಶ್ರಾಂತ ಪ್ರಾಧ್ಯಾಪಕ ಡಾ. ತಾಳ್ತಜೆ ವಸಂತಕುಮಾರರ ಮನದಲ್ಲಿ ಮೂರು ತಿಂಗಳ ಮೊದಲೇ ಹಬ್ಬದ ರೂಪುರೇಷೆಗಳ ಗೆರೆಗಳು ಮೂಡುತ್ತವೆ. ಇವರ ಮಡದಿ ಡಾ.ಮಣಿಮಾಲಿನಿ ನೆನಪಿನಲ್ಲಿ ನಡೆಯುವ ಹಬ್ಬವು ದಶಮಾನ ಪೂರೈಸಿದೆ. ಇದು ಹನ್ನೊಂದನೇ ವರುಷ. ಅಕ್ಷರ ಪ್ರೀತಿಯ ಆಪ್ತರಿರುವವಸುಧಾ ಪ್ರತಿಷ್ಠಾನ (ರಿ) ಉಪ್ಪಿನಂಗಡಿ ಇವರಿಗೆ ಹೇಮಂತ ಹಬ್ಬದ ಹೆಗಲೆಣೆ

ಹಬ್ಬವೊಂದು ಕಟ್ಟಿಕೊಡುವ ಕೊನೆಯ ಅನುಭವವೇ ಸಂಭ್ರಮ. ಬದುಕನ್ನು ಸಂಭ್ರಮಿಸದೆ ಅನುಭವಿಸುವುದೇನನ್ನು? ವರ್ತಮಾನದಲ್ಲಿ ಕನ್ನಡ, ಭಾಷೆ, ಸಾಹಿತ್ಯ, ಕಲೆಗಳು ಸಂಭ್ರಮದ ಬದಲುಅದ್ದೂರಿತನದಿಂದ ತೋಯ್ದು ಮುದುಡಿವೆ! ಕಾರಣ, ಮನೆಯ ಜಗಲಿಯಲ್ಲಿ ಇವುಗಳು ಕುಣಿಯುತ್ತಿಲ್ಲ. ಹಿರಿಯರ ಸಾಹಿತ್ಯಯಾನದತ್ತ ಕತ್ತು ತಿರುಗಿಸಿದರೆ ಮನೆ ಜಗಲಿಯ ಅಕ್ಷರ ಮಾತುಕತೆಗಳು ಗಮನ ಸೆಳೆಯುತ್ತವೆ.

ಬದುಕನ್ನು ಕಟ್ಟಿಕೊಡುವ ಇಂತಹ ಸೂಕ್ಷ್ಮ ಒಳಸುರಿಗಳಎಚ್ಚರವು ತಾಳ್ತಜೆಯವರಿಗೆ ಇದ್ದುದರಿಂದ ಹೇಮಂತ ಹಬ್ಬವು ಹತ್ತು ಮೆಟ್ಟಿಲುಗಳನ್ನು ಏರಿ ನಿಂತಿದೆ. ಮನೆಯಂಗಳದ ಮಾತು ಕತೆಯಾಗುತ್ತದೆ. ಅದು ಮಾತುಕತೆಯಾಗಿ ಮನದೊಳಗೆ ಇಳಿಯುತ್ತದೆ. ಇಲ್ಲಿ ಕಲೆ, ಸಾಹಿತ್ಯ ಆರಾಧನೆಗಳು ಸಾಂಸ್ಕøತಿಕ ಕಾರ್ಯಕ್ರಮಗಳಲ್ಲ! ಒಂದುಪ್ರೋಗ್ರಾಂಅಲ್ಲ. ಹಾಗಾಗಿಯೇ ಇರಬೇಕು, ಹೇಮಂತ ಹಬ್ಬವನ್ನು ಯಾರೂ ಮಿಸ್ ಮಾಡಿಕೊಳ್ಳುವುದಿಲ್ಲ.  

ಪ್ರತೀವರುಷ ದಶಂಬರ ತಿಂಗಳ ಉತ್ತರಾರ್ಧದ ರವಿವಾರ ಹೇಮಂತ ಹಬ್ಬ ನಡೆಯುತ್ತದೆ. ಸಾಹಿತ್ಯ, ಸಮಕಾಲೀನ ವಿಸ್ತು-ವಿಷಯಗಳತ್ತ ನೋಟ ಬೀರುವ ಒಂದು ಅವಧಿ. ಎರಡು ಗಂಟೆಯ ತಾಳಮದ್ದಳೆ. ಸಭಾ ಕಾರ್ಯಕ್ರಮದಲ್ಲಿ ಒಂದಿಬ್ಬರು ಸಾಧಕರಿಗೆ ಸಂಮಾನ. ಕೊನೆಯಲ್ಲಿ ಆಯ್ದ ಹವ್ಯಾಸಿ ಕಲಾವಿದರಿಂದ ಯಕ್ಷಗಾನ ಪ್ರದರ್ಶನ. ಸಾಂದರ್ಭಿಕವಾಗಿ ಹೂರಣಗಳು ಬದಲಾಗುತ್ತದೆ.   

ಯಕ್ಷಗಾನ ಪ್ರಸಂಗವೊಂದು ನಿಗದಿಯಾದ ತಕ್ಷಣ ಕಲಾವಿದರ ಆಯ್ಕೆ. ಕಲಾವಿದರ ಮನೋಧರ್ಮಕ್ಕನುಸಾರ ಪಾತ್ರ ಹಂಚೋಣ. ಪ್ರಸಂಗ ಬಯಸುವ ವೇಗದಲ್ಲಿ ಕಥಾ ನಡೆಯ ಗಮನ. ಬಹುಶಃ ಐದಾರು ವರುಷದಿಂದ ನಾನೂ ಭಾಗವಹಿಸುತ್ತಿದ್ದೇನೆ. ಶಿಳ್ಳೆ, ಚಪ್ಪಾಳೆಗಳ ಮೂಲಕ ರಂಗ ಸೌಂದರ್ಯವನ್ನು ಕೆಡಿಸುವ, ರಂಗಸುಖವನ್ನು ಕಸಿಯುವ ಪ್ರೇಕ್ಷಕರು ಇಲ್ಲವೇ ಇಲ್ಲ. ಪ್ರೇಕ್ಷಕರಲ್ಲಿ ವಿಮರ್ಶಾಪ್ರಜ್ಞೆ ಇರುವುದರಿಂದ ಕಲಾವಿದರೂ ಎಚ್ಚರವಾಗಿರುತ್ತಾರೆ. ತಾಳ್ತಜೆಯವರ ಆಶಯವನ್ನು ಕಲಾವಿದರು ಮಾನಿಸಿದ್ದಾರೆ.  

ಇದು ತಾಳ್ತಜೆ ಕುಟುಂಬದ ಹಬ್ಬ. ಎಲ್ಲಾ ಸದಸ್ಯರೂ ಸಕ್ರಿಯರು. ಆತಿಥ್ಯದಲ್ಲಿ ಮೇಲುಗೈ. ಹೊಟ್ಟೆ ತಂಪಾಗಿ ಖುಷಿಯಿಂದ ತೇಗಿದಾಗ ಸಂತೃಪ್ತಿ. ಎಲ್ಲಾ ಕಲಾಪಗಳು ಎಲ್ಲರಿಗೂ ಪ್ರಿಯವಾಗಬೇಕೆಂದಿಲ್ಲ. ಹೇಮಂತ ಹಬ್ಬದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಎಲ್ಲರೂ ಉಪಸ್ಥಿತರಿರುವುದು ಕುಟುಂಬದ ಹಿರಿಮೆ. ಯಶದ ಗುಟ್ಟು

ಪ್ರತಿಷ್ಠಾನವು ಪುತ್ತೂರಿನ ಕರ್ನಾಟಕ ಸಂಘ, ಉಪ್ಪಿನಂಗಡಿಯ ಕನ್ನಡ ಸಂಗಮ, ಯಕ್ಷನಂದನ ಕೊಯಿಲ.. ಮೊದಲಾದ ಸಂಸ್ಥೆಗಳೊಂದಿಗೆ ಕಾರ್ಯಕ್ರಮಗಳನ್ನು ಸಂಘಟಿಸಿದೆ. ದೂರದೂರುಗಳಲ್ಲೂ ಕಾರ್ಯಕ್ರಮಗಳು ಸಂಪನ್ನವಾಗಿವೆ. ಡಾ.ತಾಳ್ತಜೆ, ಎಂ.ಗೋಪಾಲಕೃಷ್ಣ, ಡಾ.ಗೋವಿಂದ ಪ್ರಸಾದ್ ಕಜೆ ಪ್ರೊ.ರಾ.ವೇದವ್ಯಾಸ ಟಿ.ಕೆ.ರಘುಪತಿ, ಸುಧಾ ಪ್ರಕಾಶ್, ಸುಧಾಪೂರ್ಣ.. ಇವರು ಪ್ರತಿಷ್ಠಾನದ ವಿಶ್ವಸ್ಥರು.

ಈವರೆಗೆ ಮೂವತ್ತಕ್ಕೂ ಮಿಕ್ಕಿ ಸಾಧಕರನ್ನು ಪ್ರತಿಷ್ಠಾನವು ಸಂಮಾನಿಸಿದೆ. ಹೇಮಂತ ಹಬ್ಬವಲ್ಲದೆ ಬೇರೆಡೆ ಇತರ ಸಾಹಿತ್ಯ ಕಾರ್ಯಕ್ರಮಗಳನ್ನು ಆಯೋಜಿಸಿದೆ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನದ ನೆರವನ್ನೂ ನೀಡುತ್ತಿದೆ,” ಎನ್ನುವ ಮಾಹಿತಿ ನೀಡುತ್ತಾರೆ, ಡಾ.ಗೋವಿಂದ ಪ್ರಸಾದ್ ಕಜೆ

ಹಬ್ಬದ ವೇದಿಕೆಮಣಿಮಾಲಿನಿ ಸಭಾಮಂಟಪ’.  ಕಳೆದ ವರುಷದಿಂದ ಪ್ರತ್ಯೇಕ ವ್ಯವಸ್ಥೆಯೊಂದಿಗೆ ಚಾಲನೆಗೊಂಡಿತ್ತು. ಯಾವುದೇ ಪ್ರಚಾರದ ಉದ್ದೇಶವಿಲ್ಲ. ಸಾಹಿತ್ಯ, ಕಲೆಯ ಸಮಾರಾಧನೆಯು ಬೌದ್ಧಿಕ ವಿಕಾಸಕ್ಕೆ ಪೂರಕವಾಗಬೇಕು, ಒಂದಷ್ಟು ಮಂದಿಗೆ ಪ್ರತಿಷ್ಠಾನವು ಆಸರೆಯಾಗಬೇಕು ಎಂಬ ಆಶಯ. ಹೇಮಂತ ಹಬ್ಬ ಮತ್ತು ಇತರ ಕಲಾಪಗಳಲ್ಲಿ ತಾಳ್ತಜೆಯವರು ಅಪೇಕ್ಷಿಸುವುದು ತನು ಮತ್ತು ಸು-ಮನವನ್ನು ಮಾತ್ರ.

ದಶಂಬರ 30ರಂದು (ಇಂದು) ಹನ್ನೊಂದನೇ ವರುಷದ ಹೇಮಂತ ಹಬ್ಬ. ಅಪರಾಹ್ಣ ಎರಡೂವರೆಗೆಅಂಗದ ಸಂಧಾನತಾಳಮದ್ದಳೆ. ಐದು ಗಂಟೆಗೆ ಹಾಸ್ಯಗಾರ್ ಪೆರುವೋಡಿ ನಾರಾಯಣ ಭಟ್ ಮತ್ತು ಜತ್ತನಕೋಡಿ ಸುಂದರ ಭಟ್ಟರಿಗೆ ಸಂಮಾನ. ಬಳಿಕಮಾಯಾಮೃಗ-ವಾಲಿ ಮೋಕ್ಷಪ್ರಸಂಗಗಳ ಪ್ರದರ್ಶನ.

ಊರು ಸೂರು / 30-12-2018





No comments:

Post a Comment