Wednesday, August 29, 2012

'ಅಭಿವೃದ್ಧಿ-ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ



ನಾ. ಕಾರಂತ ಪೆರಾಜೆಯವರಿಗೆ ಕರ್ನಾಟಕ ಘನ ಸರಕಾರದ ವಾರ್ತಾ ಇಲಾಖೆಯು ನೀಡುವ 'ಅಭಿವೃದ್ಧಿ-ಪರಿಸರ ಪತ್ರಿಕೋದ್ಯಮ ಪ್ರಶಸ್ತಿ' ಪ್ರದಾನ ಸಮಾರಂಭವು ಆ.27ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಜರುಗಿತು. ಕರ್ನಾಟಕ ಸರಕಾರದ ಮಾನ್ಯ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್ ಮತ್ತು ಉಪಮುಖ್ಯಮಂತ್ರಿ ಆರ್.ಅಶೋಕ್ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಸರಕಾರದ ಕಾರ್ಯದರ್ಶಿ ಬಸವರಾಜು, ವಾರ್ತಾ ಇಲಾಖೆಯ ನಿರ್ದೇಶಕ ಎನ್.ಆರ್. ವಿಶುಕುಮಾರ್ ಉಪಸ್ಥಿತರಿದ್ದರು.

Thursday, August 2, 2012

ಕನ್ನಡ ಕೌಸ್ತುಭ ಪ್ರಶಸ್ತಿ ಪ್ರದಾನ


ಬೊಳುವಾರಿನ 'ಸಾಂಸ್ಕೃತಿಕ ಕಲಾ ಕೇಂದ್ರ' ಇದರ ಆಶ್ರಯದಲ್ಲಿ ಕನ್ನಡ ಕೌಸ್ತುಭ ಪ್ರಶಸ್ತಿ ಪ್ರದಾನ ಸಮಾರಂಭವು ಜುಲೈ 27ರಂದು ಪುತ್ತೂರಿನ ಟೌನ್ ಬ್ಯಾಂಕ್ ಸಭಾಭವನದಲ್ಲಿ ಜರುಗಿತು.

ಸಮಾರಂಭವನ್ನು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಕುಮಾರು ಆಯನಾ ವಿ. ರಮಣ್ ದೀಪಜ್ವಲಿಸಿ ಶುಭ ಚಾಲನೆ ನೀಡಿದಳು. ಪುತ್ತೂರು ವಕೀಲರ ಸಂಘದ ಆದ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಮಹೇಶ್ ಕಜೆ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಚಂದ್ರ ಮಣಿಯಾಣಿ, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಕೆ. ಪದ್ಮನಾಭ ಶೆಟ್ಟಿ, ಪತ್ರಕರ್ತ ನಾ. ಕಾರಂತ ಪೆರಾಜೆ, ಮಂಗಳೂರಿನ ರಂಗಭಾರತಿಯ ನಿರ್ದೇಶಕ ಕೆ.ವಿ.ರಮಣ್ ಉಪಸ್ಥಿತರಿದ್ದರು.

ಡಾ.ರಾಘವೇಂದ್ರ ಬಂಗಾರಡ್ಕ ಗೀತೆ ರಚಿಸಿ ನಿರ್ಮಿಸಿದ ಭಾವಗೀತೆಗಳ ಅಡಕ ತಟ್ಟೆಯನ್ನು ಪುತ್ತೂರು ಪ್ರಗತಿ ಆಸ್ಪತ್ರೆಯ ಡಾ. ಸುಧಾ ಎಸ್. ರಾವ್ ಬಿಡುಗಡೆ ಮಾಡಿದರು. ಸಮಾರಂಭದಲ್ಲಿ ಹಿರಿಯ ರಂಗಭೂಮಿ ಮತ್ತು ಧಾರಾವಾಹಿ ಕಲಾವಿದ ಶೃಂಗೇರಿ ರಾಮಣ್ಣ ಇವರನ್ನು ಗೌರವಿಸಲಾಯಿತು. ರಂಗಕಲಾವಿದ ಚಿದಾನಂದ ಕಾಮತ್ ಕಾಸರಗೋಡು ಇವರ ನೇತೃತ್ವದಲ್ಲಿ ಕನ್ನಡ ಕೌಸ್ತುಭ ಪ್ರಶಸ್ತಿ, ಕನ್ನಡ ಕುವರ ಪ್ರಶಸ್ತಿ, ಕನ್ನಡ ಕುವರಿ ಪ್ರಶಸ್ತಿಗಳನ್ನು ವಿತರಿಸಲಾಯಿತು.

ಬಿಡುಗಡೆಗೊಂಡ ಅಡಕ ತಟ್ಟೆ 'ಚೈತನ್ಯದ ಹೊನಲು' ಇದರಲ್ಲಿರುವ ಆಯ್ದ ಗೀತೆಗಳನ್ನು ಪುತ್ತೂರು ಪಾಂಡರಂಗ ನಾಯಕ್ ಹಾಡಿದರು. ಕುಮಾರಿ ಆಯನಾ ವಿ. ರಮಣ್ ಇವರಿಂದ ನೃತ್ಯ ಪ್ರತಿಭಾ ಪ್ರದರ್ಶನ ಜರುಗಿತು. ಚಿದಾನಂದ ಕಾಮತ್ ಕಾಸರಗೋಡು ಕಾರ್ಯಕ್ರಮವನ್ನು ಆಯೋಜಿಸಿದ್ದರು.