Friday, November 5, 2010

'ಹಾರಕ' - ಸ್ಪರ್ಧಾ ಬಹುಮಾನ/ಪ್ರಶಸ್ತಿ ಪ್ರದಾನ

ಉದಯವಾಣಿಯಲ್ಲಿ ಪ್ರಕಟವಾದ ನಾ. ಕಾರಂತ ಪೆರಾಜೆ ಅವರ 'ಉಳಿಸಬೇಕಿದೆ, ಈ ಕಿರುಧಾನ್ಯ : ಹಾರಕ' ಬರೆಹಕ್ಕೆ 'ಭಾರತೀಯ ಕಿರುಧಾನ್ಯಗಳ ಜಾಲ'ವು ಪ್ರಾಯೋಜಿಸುವ ಲೇಖನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಂದಿರುತ್ತದೆ. ಇತ್ತೀಚೆಗೆ ಮೂಡಿಗೆರೆ ಸನಿಹದ ದೇವವೃಂದದಲ್ಲಿ ನಡೆದ ಕೃಷಿ ಮಾಧ್ಯಮ ಕೇಂದ್ರದ (ಕಾಮ್) ದಶಮಾನ ಕಾರ್ಯಕ್ರಮದಲ್ಲಿ ಡೆಕ್ಕನ್ ಡೆವಲಪ್ಮೆಂಟ್ ಸೊಸೈಟಿಯ ಕಮ್ಯೂನಿಟಿ ಮೀಡಿಯಾ ಮೊಲ್ಲಮ್ಮ ಪ್ರಶಸ್ತಿ ಪತ್ರ ಮತ್ತು ಬಹುಮಾನ ಮೊತ್ತ ರೂ.5,000 ನೀಡಿ ಗೌರವಿಸಿದರು. ಮಿಲೆಟ್ ನೆಟ್ವರ್ಕ್ ಆಫ್ ಇಂಡಿಯಾದ ರಾಷ್ಟ್ರೀಯ ಸಂಯೋಜಕ ವಟ್ಟೂರಿ ಶ್ರೀನಿವಾಸ್ ಸಂದರ್ಭೋಚಿತವಾಗಿ ಮಾತನಾಡಿದರು. ಕಾಮ್ ದಶಮಾನ ವೇದಿಕೆಯಲ್ಲಿ ಶ್ರೀ ಪಡ್ರೆ, ವೈ.ಸಿ.ರುದ್ರಪ್ಪ, ಎಸ್.ಎಂ.ಪಾಟೀಲ, ಡಿ.ಬಿ.ಸುಬ್ಬೇಗೌಡ, ಅನಿತಾ ಪೈಲೂರು ಉಪಸ್ಥಿತರಿದ್ದರು.

Thursday, November 4, 2010

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಮೂಡಿಗೆರೆ ಸನಿಹದ ದೇವವೃಂದದಲ್ಲಿ ನವೆಂಬರ್ 28ರಿಂದ 30ರ ತನಕ ಕೃಷಿ ಮಾಧ್ಯಮ ಕೇಂದ್ರದ ಪತ್ರಿಕೋದ್ಯಮ ತರಬೇತಿ ಶಿಬಿರ. ನ.31ರಂದು ಕೇಂದ್ರದ ದಶಮಾನೋತ್ಸವ. ಸಿರಿಧಾನ್ಯಗಳ ಕುರಿತಾದ ಬರೆಹಕ್ಕೆ ಪ್ರಥಮ ಬಹುಮಾನ ಪಡೆದ ಗುಂಗಿನಲ್ಲಿದ್ದಾಗ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರದ ಸುದ್ದಿ.

ರಾಜ್ಯ ಮಟ್ಟದ ಪ್ರಶಸ್ತಿಗಳಿಗೆ 'ರಾಜಕೀಯ ಸರ್ಕಸ್' ನಡೆಯುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬರುತ್ತಿತ್ತು. ಪ್ರಶಸ್ತಿಯೊಂದಿಗೆ ಸಿಗುವ ಒಂದು ಲಕ್ಷದ ಲಕ್ಷ್ಯ! ಅದಕ್ಕೆ ಪ್ರಶಸ್ತಿ ಉಪಾಧಿ. ಇದಕ್ಕಾಗಿ ಎಂತೆಂತಹ ರಾಜಕೀಯ ಒತ್ತಡ, ವಶೀಲಿ, ಮಧ್ಯವರ್ತಿಗಳು... ಮತ್ತೊಂದೆಡೆ `ಸರಿಯಾಗಿ ತೂಗಿನೋಡಿಯೇ ಅರ್ಹರಿಗೆ ಪ್ರಶಸ್ತಿ ಕೊಟ್ಟಿದ್ದೇವೆ' ಎನ್ನುವ ಮುಖ್ಯಮಂತ್ರಿಗಳು. ಈ ಮಧ್ಯೆ ಕನ್ನಡಪ್ರಭದ ಸಂಪಾದಕರು ಪ್ರಶಸ್ತಿಯನ್ನು ನಿರಾಕರಿಸಿಯೇ ಬಿಟ್ಟರು.

ರಾಜಧಾನಿಯಲ್ಲಿ ಪ್ರಶಸ್ತಿ ಕುರಿತಾದ ಎದ್ದು ಕಾಣುವ ಕೊಳಕುಗಳು. ಇತ್ತ ಜಿಲ್ಲಾ ಪ್ರಶಸ್ತಿಯು ಯಾವುದೆ ಸದ್ದುಗದ್ದಲವಿಲ್ಲದೆ ಹುಡುಕಿ ಬಂದದ್ದು. ಅದೂ 'ಗ್ರಾಮೀಣ ಪತ್ರಿಕೋದ್ಯಮ' ವಿಭಾಗಕ್ಕೆ. ಪ್ರತೀ ವರ್ಷ ದಕ್ಷಿಣ ಕನ್ನಡ ಜಿಲ್ಲಾಡಳಿತವು 'ಪತ್ರಕರ್ತ ವಿಭಾಗ'ದಲ್ಲಿ ಪ್ರಶಸ್ತಿಯನ್ನು ನೀಡುತ್ತಿತ್ತು. ಈ ಸಲ ಗ್ರಾಮೀಣ ಪತ್ರಿಕೋದ್ಯಮಕ್ಕೆ ಮಣೆ. ಈ ಪ್ರಶಸ್ತಿಗೆ ನಾನೇ ಬಲಿಯಾಗಬೇಕೇ?!

ಇರಲಿ, ಕೊನೇ ಪಕ್ಷ ಬೇರೇನೂ ಸಿಗದಿದ್ದರೂ (ಕಾಫೀ ವಗೈರೆ..!) ಸರಕಾರದ ಮುದ್ರೆಯುಳ್ಳ 'ಪ್ರಶಸ್ತಿ ಪತ್ರ'ವಾದರೂ ಸಿಕ್ಕಿತಲ್ಲಾ! (ಈ ಪತ್ರವನ್ನಿಟ್ಟುಕೊಂಡು ಏನು ಮಾಡೋದು ಎಂಬುದು ಬೇರೆ ಮಾತು). ಇದೇ ರೀತಿ ಪ್ರಶಸ್ತಿಗಳು ಕನ್ನಾಡಿನಾದ್ಯಂತ ಅರ್ಹರನ್ನು ಅರಸಿಕೊಂಡು ಹೋದರೆ ಚೆನ್ನಾಗಿತ್ತಲ್ವಾ. ಆ ಖುಷಿನೇ ಬೇರೆ. ಸ್ನೇಹಿತರೊಂದಿಗೆ ಹೇಳಿಕೊಳ್ಳಲು ಮಜಾ.

ಇಂತಹ ಮಜಾ, ಖುಷಿಯನ್ನು ’ಪ್ರಶಸ್ತಿ’ಯ ಹಿನ್ನೆಲೆಯಲ್ಲಿ ಹಂಚಿಕೊಳ್ಳುತ್ತಿದ್ದೇನೆ.

Tuesday, October 19, 2010

'ಹಾರಕ' ಲೇಖನಕ್ಕೆ ಪ್ರಥಮ ಪುರಸ್ಕಾರ

ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ ನಾ. ಕಾರಂತ ಪೆರಾಜೆಯವರ 'ಉಳಿಸಬೇಕಿದೆ ಈ ಕಿರುಧಾನ್ಯ - ಹಾರಕ' ಬರೆಹವು ಮಿಲ್ಲೆಟ್ ನೆಟ್ವರ್ಕ್ ಆಪ್ ಇಂಡಿಯಾ (ಮಿನಿ) ಆಯೋಜಿಸಿದ ಲೇಖನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಕ್ಕೆ ಆಯ್ಕೆಯಾಗಿದೆ.

ಜುಲೈ 21, 2010ರಂದು ಉದಯವಾಣಿಯ ಹುಬ್ಬಳ್ಳಿ ಆವೃತ್ತಿಯಲ್ಲಿ ಈ ಬರೆಹ ಪ್ರಕಟವಾಗಿತ್ತು. ಧಾರವಾಡದ ಕೃಷಿ ಮಾಧ್ಯಮ ಕೇಂದ್ರದ ನೇತೃತ್ವದಲ್ಲಿ ಪುರಸ್ಕಾರಗಳ ಆಯ್ಕೆ ಪ್ರಕ್ರಿಯೆ ನಡೆದಿತ್ತು.

ನಮ್ಮ ಕೃಷಿರಂಗ ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಸೂಕ್ತ ಪರಿಹಾರವಾಗಬಲ್ಲ; ಆಹಾರ ಮತ್ತು ಮೇವಿನ ಭದ್ರತೆ ಕಲ್ಪಿಸಬಲ್ಲ, ಅಪಾರ ಪೌಷ್ಟಿಕಾಂಶಗಳ ಆಗರವಾಗಿರುವ; ಆರೋಗ್ಯಕ್ಕೆ ಪೂರಕವಾಗಿರುವ ಸಾವಿ, ನವಣೆ, ಸಜ್ಜೆ, ಆರ್ಕ, ಉದಲು, ಕೊರ್ಲೆ, ಬರಗ ಮೊದಲಾದ ಧಾನ್ಯಗಳಿಗೆ ಒರಟು ಧಾನ್ಯಗಳೆಂಬ ಹಣೆಪಟ್ಟಿ ಕಟ್ಟಿ ಇವನ್ನು ದೇಶದ ಆಹಾರ ಧಾನ್ಯಗಳ ಅಗ್ರಪಂಕ್ತಿಯಲ್ಲಿ ಪೂರ್ಣ ಕಡೆಗಣಿಸಲಾಗಿದೆ. 'ಮಿನಿ' ಅವುಗಳನ್ನು ಮತ್ತೆ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಮಾಧ್ಯಮವೂ ಈ ಕಾರ್ಯದಲ್ಲಿ ಕೈಜೋಡಿಸಬೇಕೆನ್ನವ 'ಮಿನಿ' ಅಂತಹ ಪ್ರಯತ್ನಗಳನ್ನು ಪ್ರೋತ್ಸಾಹಿಸುತ್ತಿದೆ.

ಬಹುಮಾನವು ಐದು ಸಾವಿರ ರೂಪಾಯಿ ನಗದು ಪುರಸ್ಕಾರ ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ. ಪುರಸ್ಕಾರ ಪ್ರದಾನ ಸಮಾರಂಭವು ಅಕ್ಟೋಬರ್ 31, 2010ರಂದು ಬೆಳಿಗ್ಗೆ 10 ಗಂಟೆಗೆ ಮೂಡಿಗೆರೆ ತಾಲೂಕಿನ ದೇವವೃಂದದಲ್ಲಿ ನಡೆಯುವ ಕೃಷಿ ಮಾಧ್ಯಮ ಕೇಂದ್ರದ ದಶಮಾನ ಸಮಾರಂಭದಲ್ಲಿ ನಡೆಯಲಿದೆ.

Sunday, July 4, 2010

ಪ್ರಶಸ್ತಿ ಪಡೆದಾಗ...

ಕೇಂದ್ರ ರೈಲ್ವೇ ಸಚಿವ ಮುನಿಯಪ್ಪನವರಿಂದ 'ಮಂಡಿಬೆಲೆ ಶ್ಯಾಮಣ್ಣ ಸ್ಮಾರಕ ಪ್ರಶಸ್ತಿ' ಪಡೆದಾಗಿನ ಸಂದರ್ಭ
(27 ಜೂನ್ 2010, ಅರಮನೆ ಮೈದಾನ, ಬೆಂಗಳೂರು. ಸಂದರ್ಭ: ರಾಜ್ಯ ಕಾರ್ಯನಿರತ ಪತ್ರಕರ್ತರ ಸಮ್ಮೇಳನ)

Tuesday, June 22, 2010

ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ) ನೀಡುವ 2008ರ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದೇನೆಂದು ತಿಳಿಸಲು ಹರ್ಷವಾಗುತ್ತಿದೆ. ಗ್ರಾಮೀಣ ವರದಿಗಾರಿಕೆ ವಿಭಾಗದಲ್ಲಿ ವಿಜಯಕರ್ನಾಟಕ ಪತ್ರಿಕೆಯ ಸಾಪ್ತಾಹಿಕದಲ್ಲಿ (17-8-2008) ಪ್ರಕಟವಾದ ನನ್ನ 'ಮೌನದ ಬದುಕಿಗೆ ಮಾತು ಕೊಟ್ಟ ಸಸಾ' ಬರೆಹವು 'ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ'ಗೆ ಆಯ್ಕೆಯಾಗಿದೆ. ಜೂನ್ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ ಜರಗುವ ಪತ್ರಕರ್ತರ ರಾಜ್ಯ ಸಮ್ಮೇಳನದ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಕೊಪ್ಪದ 'ಸಹಕಾರಿ ಸಾರಿಗೆ'ಯು ಒಂದು ಸಂಘಟನಾತ್ಮಕ ಸಂಸ್ಥೆ. ಕಾರ್ಮಿಕರೇ ಇಲ್ಲಿ ಧನಿಗಳು. ಹಳ್ಳಿ ಮತ್ತು ಗ್ರಾಮೀಣ ಬದುಕನ್ನು ಹತ್ತಿರದಿಂದ ನೋಡಿದ, ಅನುಭವಿಸಿ ಅನುಭವವಿದ್ದ ಸಹಕಾರಿ ಸಾರಿಗೆಯ ಎಲ್ಲಾ ಸದಸ್ಯರ ಒಗ್ಗಟ್ಟಿನ ಫಲವಾಗಿ ಕೊಪ್ಪದ ಹಳ್ಳಿಗಳಿಗೆ ಸಾರಿಗೆ ವ್ಯವಸ್ಥೆಯಾಗಿ ಸುತ್ತುಮುತ್ತಲ ಹಳ್ಳಿಗಳು ಮತ್ತು ಕೃಷಿ ಅಭಿವೃದ್ದಿಯಾದುವು. ಇದರಿಂದಾಗಿ ಕೃಷಿ ಮತ್ತು ಗ್ರಾಮೀಣ ಬದುಕಿನಲ್ಲಿ ಹೊಸ ಬೆಳಕು ಮೂಡಿದ ತಾಜಾ ಚಿತ್ರಣವನ್ನು 'ಮೌನದ ಬದುಕಿಗೆ ಮಾತು ಕೊಟ್ಟ ಸಸಾ' ಬರೆಹವು ಬೆಳಕು ಚೆಲ್ಲಿತ್ತು.

Tuesday, May 25, 2010

ಪ್ರತಿಮಾ - ಮದುವೆಯ ಸಡಗರ

ಕೂಡ್ಲು ಕ್ರಷ್ಣ ಮಯ್ಯರ ಚತುರ್ಥ ಪುತ್ರಿ ಪ್ರತಿಮಾ ಮತ್ತು ಕಿದೂರು ಮೂಲದ, ಸದ್ಯ ತ್ರಿಶೂರಿನಲ್ಲಿರುವ ಸುಧೀರ್ - ಇವರ ವಿವಾಹ ಸಮಾರಂಭ ಮೇ ೨೧, ೨೦೧೦ರಂದು ಹೊಸಂಗಡಿ ಗುರುನರಸಿಂಹ ಕಲ್ಯಾಣ ಮಂಟಪದಲ್ಲಿ ಜರುಗಿತು. ಮರುದಿವಸ ಕಿದೂರು ವರನ ಮನೆಯಲ್ಲಿ ನೂತನ ವಧೂವರರ ಗ್ರಹಪ್ರವೇಶ ಸಮಾರಂಭ ನಡೆಯಿತು. ಮೇ ೨೩ರಂದು ಕೂಡ್ಲು ವಧುವಿನ ಮನೆಯಲ್ಲಿ ’ಸಮ್ಮಾನ. ಆ ದಿವಸ ನಡೆಯಿತು - ಸತ್ಯನಾರಾಯಣ ಪೂಜೆ.

Thursday, April 8, 2010

ನೆನಪು-ಆಸಕ್ತಿ ಮರುಕಳಿಸಿದಾಗ

ನೆನಪು-ಆಸಕ್ತಿ ಮರುಕಳಿಸಿದಾಗ - ಮಾರ್ಚ್ 27, 2010ರಂದು ಕೊಡೆಂಕಿರಿಯಲ್ಲಿ 'ಭೀಷ್ಮವಿಜಯ'
(ಭೀಷ್ಮ: ಗುಂಡ್ಯಡ್ಕ ಈಶ್ವರ ಭಟ್, ಅಂಬೆ : ನಾ.ಕಾ, ಪರಶುರಾಮ : ದಿವಾಣ ಶಿವಶಂಕರ ಭಟ್, ಸಾಲ್ವ : ಉಂಡೆಮನೆ ಕೃಷ್ಣ ಭಟ್, ಬ್ರಾಹ್ಮಣ : ಪೆರುವೋಡಿ ಸುಬ್ಬಣ್ಣ ಭಟ್, ಏಕಲವ್ಯ : ವೆಂಕಟೇಶ ಮಯ್ಯ
ಹಿಮ್ಮೇಳ : ಭಾಗವತರು : ಸತ್ಯನಾರಾಯಣ ಪುಣಿಂಚಿತ್ತಾಯ,
ಚೆಂಡೆ-ಮದ್ದಳೆ : ಜಗನ್ನಿವಾಸ ರಾವ್ ಪಿ.ಜಿ., ಚಂದ್ರಶೇಖರ ಕೊಂಕಣಾಜೆ)

Wednesday, April 7, 2010

ಭತ್ತ ಉತ್ಸವದಲ್ಲಿ ನಾ. ಕಾರಂತ ಪೆರಾಜೆಯವರಿಗೆ ಪುರಸ್ಕಾರ


ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ ನಾ. ಕಾರಂತ ಪೆರಾಜೆ ಇವರನ್ನು ದೇಸಿ ಭತ್ತದ ಬೀಜ ಹಾಗೂ ಸಂಸ್ಕ್ಕೃತಿಯನ್ನು ಉಳಿಸಿ ಬೆಳೆಸುವ ವಿಚಾರಗಳನ್ನು ಮಾಧ್ಯಮಗಳಲ್ಲಿ ಬೆಳಕು ಬೀರಿರುವ ಶ್ರಮವನ್ನು ಶ್ಲಾಘಿಸಿ ಬೆಂಗಳೂರಿನಲ್ಲಿ ಜರುಗಿದ 'ಭತ್ತ ಉತ್ಸವದಲ್ಲಿ ಗೌರವಿಸಲಾಯಿತು.

ರಾಜ್ಯ ಸರಕಾರದ ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಹರತಾಳು ಹಾಲಪ್ಪ ಇವರ ಉಪಸ್ಥಿತಿಯಲ್ಲಿ ಮಾಜಿ ಸಚಿವೆ ಕು: ಶೋಭಾ ಕರಂದ್ಲಾಜೆಯವರು ಸ್ಮರಣಿಕೆ, ಪುರಸ್ಕಾರ ಕಥನ ಫಲಕವನ್ನು ನೀಡಿ ಗೌರವಿಸಿದರು.

ಎಲೆ ಮರೆಯ ಕಾಯಿಯಂತಿದ್ದ ಅನೇಕ ಸಾವಯವ ಕೃಷಿಕರು ಮತ್ತು ಬೀಜಸಂರಕ್ಷರನ್ನು ಮುಖ್ಯವಾಹಿನಿಗೆ ಪರಿಚಯಿಸಿದ ನಾ. ಕಾರಂತರೂ ಸೇರಿದಂತೆ ರಾಜ್ಯದ ಏಳು ಮಂದಿ ಕೃಷಿ ಮತ್ತು ಗ್ರಾಮೀಣ ಪತ್ರಕರ್ತರಿಗೆ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಗಿತ್ತು.

ಬೆಂಗಳೂರಿನ 'ಸಹಜ ಸಮೃದ್ಧ', 'ಭತ್ತ ಉಳಿಸಿ ಆಂದೋಳನ', ತಮಿಳುನಾಡಿದ 'ತನೆಲ್' ಮತ್ತು 'ಯೋರಾ' ಸಂಸ್ಥೆಗಳು ಕಾರ್ಯಕ್ರಮವನ್ನು ಆಯೋಜಿಸಿತ್ತು. ಸಹಜ ಸಮೃದ್ಧದ ಅಧ್ಯಕ್ಷ ಎನ್.ಆರ್.ಶೆಟ್ಟಿ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ನಿರ್ದೇಶಕ ಜಿ.ಕೃಷ್ಣಪ್ರಸಾದ್ ಕಾರ್ಯಕ್ರಮವನ್ನು ಸಂಘಟಿಸಿದ್ದರು.

Sunday, February 7, 2010

ಬುಕ್ ಟಾಕ್

ಪತ್ರಕರ್ತನೊಬ್ಬನಿಗೆ ಪಾಸಿಟಿವ್ ನೋಟವಿದ್ದರೆ ಆಗುವ ಲಾಭಕ್ಕೆ 'ಕಾಡು ಮಾವು' ಒಳ್ಳೆಯ ಉದಾಹರಣೆ. ಅಡಿಕೆ ಪತ್ರಿಕೆ ಸದ್ದಿಲ್ಲದೆ ಸಮಾಜಮುಖಿ ಸೇವೆಗೆ ನಿಂತಿದೆ.

ಈ ಪತ್ರಿಕೆಯ ಸಹಾಯಕ ಸಂಪಾದಕ ನಾ. ಕಾರಂತ ಪೆರಾಜೆ. ನಾಡಿನ ಉದ್ದಗಲಕ್ಕೂ ಸುತ್ತಾಡಿದ ಇವರು ಯಶಸ್ಸು ಗಳಿಸಿ ಮಾದರಿಯಾದ ರೈತರ ಬಗ್ಗೆ ಬರೆದಿದ್ದಾರೆ. ಆ ಬರೆಹಗಳ ಸಂಕಲನವೇ - ಕಾಡು ಮಾವು.

’ಕಾರಂತರು ಪತ್ರಿಕೋದ್ಯಮದ ಒಳ ಹೊರಗು ಬಲ್ಲವರು. ಅದಕ್ಕೆ ಇಲ್ಲಿರುವ ಲೇಖನಗಳೇ ಸಾಕ್ಷಿ ಎನ್ನುತ್ತಾರೆ’ ಮುನ್ನುಡಿಯಲ್ಲಿ ಶಿವರಾಂ ಪೈಲೂರು. ಪುತ್ತೂರಿನ ಕೊಡೆಂಕಿರಿ ಪ್ರಕಾಶನ ಈ ಕೃತಿ ಪ್ರಕಟಿಸಿದೆ.

(ಫೆ. 6, 2010 - ವಿಜಯಕರ್ನಾಟಕದ 'ಮೀಡಿಯಾ ಮಿರ್ಚಿ ಅಂಕಣದಲ್ಲಿ ಜಿ.ಎನ್.ಮೋಹನ್ ಅವರು ಪುಸ್ತಕದ ಕುರಿತು ಬರೆದ ಒಳ್ಳೆಯ ಮಾತು. ಮೋಹನ್ ಅವರಿಗೆ ಕೃತಜ್ಞತೆಗಳು)

Tuesday, January 26, 2010

ಇಷ್ಟವಾಗುವ 'ಕಾಡು ಮಾವು'

(ಜನವರಿ 21, 2010 ಗುರುವಾರದ ಪ್ರಜಾವಾಣಿಯ ಕೃಷಿ ಪುರವಣಿಯಲ್ಲಿ ಪ್ರಕಟವಾದ ’ಪುಸ್ತಕ ಪರಿಚಯ’ ಬರೆಹ)

ಮೂರು ವರ್ಷಗಳ ಅವಧಿಯಲ್ಲಿ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಇಪ್ಪತ್ತೇಳು ಕೃಷಿ ಸಂಬಂಧಿ ಲೇಖನಗಳನ್ನು ನಾ. ಕಾರಂತ ಪೆರಾಜೆ 'ಕಾಡು ಮಾವು' ಹೆಸರಿನಲ್ಲಿ ಪ್ರಕಟಿಸಿದ್ದಾರೆ. 'ಬೇಸಾಯ ಲಾಭದಾಯಕವಲ್ಲ' ಎಂಬ ಮಾತು ಹೆಚ್ಚಾಗಿ ಕೇಳಿ ಬರುತ್ತಿರುವ ಈ ಸಂದರ್ಭದಲ್ಲಿ ಎಲೆ ಮರೆಯ ಕಾಯಿಗಳಂತೆ ಬೇಸಾಯ ಹಾಗೂ ಅದರ ಪೂರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಯಶಸ್ವಿಯಾದ ರೈತರ ಯಶೋಗಾಥೆಗಳನ್ನು ಅವರು ಗುರುತಿಸಿ ದಾಖಲಿಸಿದ್ದಾರೆ.

ಲೇಖಕರಿಗೆ ಕೃಷಿ ಹಾಗೂ ಅದರ ಪೂರಕ ಚಟುವಟಿಕೆಗಳಲ್ಲಿ ಅಪಾರ ಆಸಕ್ತಿ ಇದೆ. ಕೃಷಿ, ತೋಟಗಾರಿಕೆ, ಜೇನುಸಾಕಣೆ ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿ ಯಶಸ್ವಿಯಾದವರನ್ನು ಗುರುತಿಸಿ ಅವರ ಸಾಹಸ, ಸಾಧನೆಗಳನ್ನು ಇತರರಿಗೆ ಪರಿಚಯಿಸಬೇಕು ಎಂಬ ಆಸಕ್ತಿಯೂ ಇದೆ.


ಜೇನು ಸಾಕಣೆಯಲ್ಲಿ ಯಶಸ್ವಿಯಾದ ಧರ್ಮೇಂದ್ರ ಹೆಗಡೆ, ಹಲಸಿನ ಹಣ್ಣು-ಕಾಯಿಗಳಿಂದ ಹಪ್ಪಳ, ಚಿಪ್ಸ್ ಮತ್ತಿತರ ಉತ್ಪನ್ನಗಳನ್ನು ಮಾಡುವಲ್ಲಿ ಯಶಸ್ವಿಯಾದ ಶಿರಸಿಯ ಎರಡು ರೈತಕುಟುಂಬಗಳು, ನೂರಕ್ಕೂ ಮಿಕ್ಕಿ ಕಾಡುಮಾವಿನ ತಳಿಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸಿದ ಮಾಪಲ್ತೋಟದ ಸುಬ್ರಾಯ ಭಟ್, ಸಾವಯವ ಪದ್ದತಿಯಲ್ಲಿ ರಾಜಮುಡಿ ಭತ್ತ ಬೆಳೆದ ಹೊಳೆನರಸಿಪುರ ತಾಲೂಕಿನ ಉಣ್ಣೇನಹಳ್ಳಿಯ ರೈತ ಹೊಯ್ಸಳ ಎಸ್. ಅಪ್ಪಾಜಿ, ಬೆಂಗಳೂರು ಸಮೀಪದ ನೆಲಮಂಗಲದ ಬಳಿ ಒಂದೂಕಾಲೆಕರೆಯಲ್ಲಿ ಸಾವಯವ ಕೃಷಿಯಲ್ಲಿ ತೊಡಗಿರುವ ನಿವೃತ್ತ ಬಿಎಸ್ಎನ್ಎಲ್ ಅಧಿಕಾರಿ ಎನ್.ಆರ್.ಶೆಟ್ಟಿ ದಂಪತಿ.. ಹೀಗೆ ಹಲವಾರು ಯಶಸ್ವಿ ರೈತರ ಬಗ್ಗೆ ಬರೆದ ಲೇಖನಗಳು ನಮ್ಮ ರೈತ ಸಮುದಾಯಕ್ಕೆ ಮಾದರಿ ಆಗಬಲ್ಲವು.


ಈ ಲೇಖನಗಳೆಲ್ಲಾ ಸುಲಭವಾಗಿ ಓದಿಸಿಕೊಳ್ಳುತ್ತವೆ. ಸಾಮಾನ್ಯ ಕನ್ನಡ ಜ್ಞಾನ ಇರುವವರಿಗೂ ಅರ್ಥವಾಗುತ್ತದೆ. ಈ ಕಾರಣಕ್ಕೆ 'ಕಾಡು ಮಾವು' ಇಷ್ಟವಾಗುತ್ತದೆ.
- ಪಿ.ಕೆ.

Saturday, January 16, 2010

ಕಾಡುವ ನೆನಪು

ಕೀರ್ತಿಶೇಷ ಕೆರೆಮನೆ ಶಂಭು ಹೆಗಡೆ
ಕೀರ್ತಿಶೇಷ ವಿಟ್ಲ ಗೋಪಾಲಕೃಷ್ಣ ಜೋಯಿಸರು

ಕು.ಕರುಣಾ ಭರತನಾಟ್ಯ ರಂಗಪ್ರವೇಶ


ದಿನಾಂಕ 12-10-2008, ಪುತ್ತೂರಿನ 'ನಟರಾಜ ವೇದಿಕೆ'ಯಲ್ಲಿ
ಪುತ್ತೂರಮೂಲೆ ಮಹಾಬಲ ಭಟ್ಟರ ಪುತ್ರಿ
ಕು.ಕರುಣಾ ಅವರ ಭರತನಾಟ್ಯ ರಂಗಪ್ರವೇಶದ ಸಂದರ್ಭ

ಕಾಲದ ದಾಖಲೆ!

ಭಂಡಿಹೊಳೆ-ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರ ಯಕ್ಷಗಾನ ಸಂಘದ ಸಮಾರಂಭವೊಂದರಲ್ಲಿ -



'ತಳಿ ತಪಸ್ವಿ' ಪುಸ್ತಕದ ಅನಾವರಣ

ದಿನಾಂಕ 28-9-2005ರಂದು
ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್ ಆಶ್ರಯದಲ್ಲಿ
'ತಳಿ ತಪಸ್ವಿ' ಪುಸ್ತಕದ ಅನಾವರಣ

Tuesday, January 12, 2010

ಮಟ್ಟಿಯವರಿಗೆ ಸಂಮಾನ

ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ, ಸುಳ್ಯ ಇವರ ವತಿಯಿಂದ 11-10-2009ರಂದು ನೀರಬಿದಿರೆಯ ಡಾ.ಗಣೇಶ ಶರ್ಮಾ ಅವರ ಮನೆಯಲ್ಲಿ ಜರುಗಿದ ಸರಣಿ ಶಿವಪೂಜಾ ಸಮಾಪನಾ ಸಮಾರಂಭದಲ್ಲಿ
ಹಿರಿಯ ಪತ್ರಕರ್ತ ಗಂಗಾಧರ ಮಟ್ಟಿಯವರನ್ನು ಸಂಮಾನಿಸಿದಾಗ -
ದಿವ್ಯ ಉಪಸ್ಥಿತಿ : ಪರಮಪೂಜ್ಯ ನಿ.ಪ್ರ.ಸ್ವ.ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಅರಮೇರಿ ಮಠ, ವಿರಾಜಪೇಟೆ

ಸಾಧಕರಿಗೆ ಸಂಮಾನ

ರಾಘವದಾಸ್ ಹೂಹಾಕುವ ಕಲ್ಲು ಇವರ ಯಕ್ಷಗಾನ ವೇಷಭೂಷಣಗಳ ದಶಮಾನ ಸಂಭ್ರಮದಲ್ಲಿ
ಸಾಧಕರಿಗೆ ಸಂಮಾನ (10-2-2008)

ಜಾತಿ ಗೌರವ(!)

ಕೂಟಮಹಾಜಗತ್ತು ಸಾಲಿಗ್ರಾಮ - ಇದರ ವತಿಯಿಂದ ಸಾಲಿಗ್ರಾಮದ ಗುರುನರಸಿಂಹ ದೇವಸ್ಥಾನದಲ್ಲಿ ಗೌರವ(!) (15-1-2007)

Monday, January 11, 2010

ಹಸಿರು ಮಾತು ಮತ್ತು ಶೇಣಿ ಚಿಂತನ - ಪುಸ್ತಕ ಬಿಡುಗಡೆ



೧. ಅಡಿಕೆ ಪತ್ರಿಕೆ ಪ್ರಕಾಶಕ ಖಂಡಿಗೆ ಶ್ರೀಕೃಷ್ಣ ಭಟ್ಟರು ಕೃಷಿ ಯಶೋಗಾಥೆಗಳ ಸಂಕಲನ 'ಹಸಿರು ಮಾತು' ಪುಸ್ತಕದ ಅನಾವರಣ (2005)
2, ೩. ಯಕ್ಷಗಾನ ಭೀಷ್ಮ ಶೇಣಿ ಗೋಪಾಲಕೃಷ್ಣ ಭಟ್ಟರ ಚಿಂತನ 'ಶೇಣಿ ಚಿಂತನ' ಕೃತಿಯ ಲೋಕಾರ್ಪಣ - ಉಡುಪಿಯಲ್ಲಿ (2003)

ಪ್ರಶಸ್ತಿ ಸಂಭ್ರಮ



ಪ್ರಶಸ್ತಿಯ ಖುಷಿಯ ಕ್ಷಣ :
(1) ಧಾರವಾಡ ಕೃಷಿ ಮಾಧ್ಯಮ ಕೇಂದ್ರದ ರಾಜ್ಯ ಮಟ್ಟದ ಕೃಷಿ ಪತ್ರಿಕೋದ್ಯಮ ಪ್ರಶಸ್ತಿ - 30-11-2003 (2) 'ಚರಕ' ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ - 2003 (3) ಪ.ಗೋ.ಪ್ರಶಸ್ತಿ - 2003 (4) 'ಮುರಘಾಶ್ರೀ' ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ - 2007

Sunday, January 10, 2010

ಕೆನ್ ಅವರೊಂದಿಗೆ ಕೆಲವು ಕ್ಷಣ..

ಹವಾಯಿಯ ಹಣ್ಣುಕೃಷಿಕ, ಪತ್ರಕರ್ತ ಕೆನ್ ಲವ್ ಕನ್ನಾಡಿಗೆ ಬಂದಾಗ..

ನಲ್ನುಡಿ


ಕಾಡು ಮಾವು ಓದಿದ್ದೇನೆ. 24 ಲೇಖನಗಳೂ ಬಲು ಚಂದ. ಮಾಹಿತಿ, ವಿತರಣೆ, ಜೀವನಪ್ರೀತಿ, ಪರ್ಯಾಯ ಶ್ರೇಷ್ಠತಾದರರಿಗೆ ಒತ್ತು. ಎಲ್ಲದರಲ್ಲೂ ಅಷ್ಟು ರುಚಿಕಟ್ಟು, ಚೊಕ್ಕ. ಲೇಖನಗಳಲ್ಲಿ ಹೇಳಿರುವ ಹಲವು ಖಾದ್ಯಗಳಂತೆ. ಚಿಕ್ಕ ವಾಕ್ಯಗಳು, ನೇರ, ಆದರೂ ಬೋಳು-ಬೋಳು ಅನ್ನಿಸದ ಮೇಲ್ಮಟ್ಟದ ಬರವಣಿಗೆ
- ಡಾ.ಯಂ.ಪ್ರಭಾಕರ ಜೋಶಿ, ಮಂಗಳೂರು (3-11-2009)

'ಕಾಡು ಮಾವು' ಅನಾವರಣ.


ಶಿರಸಿ ಸನಿಹದ ಬೆಂಗಳಿಯಲ್ಲಿ ಜರುಗಿದ ಧಾರವಾಡದ ಕೃಷಿ ಮಾಧ್ಯಮ ಕೇಂದ್ರದ ಒಂಭತ್ತನೇ ವಾರ್ಷಿಕೋತ್ಸವದಲ್ಲಿ 'ಕಾಡು ಮಾವು' ಪುಸ್ತಕದ ಅನಾವರಣ. (ದಿನಾಂಕ 25-10-2009)