Monday, August 17, 2020

ಒಡಿಯೂರಿನಲ್ಲಿ ಪ್ರೊ.ವಿ.ಬಿ.ಅರ್ತಿಕಜೆಯವರ ಶ್ರೀ ವಿಷ್ಣುಸಹಸ್ರನಾಮ ಪದ್ಯಾನುವಾದ ಅನಾವರಣ 29-6-2020

 

“ಬದುಕಿಗೆ ಮಾರಕವಾಗಿರುವ ಹಲವಾರು ವ್ಯಾಧಿಗಳನ್ನು ನಿಯಂತ್ರಿಸುವ ಶಕ್ತಿ ಶ್ರೀ ವಿಷ್ಣುಸಹಸ್ರನಾಮದಲ್ಲಿದೆ. ಇದು ಸಾರ್ವಕಾಲಿಕ ಸಾಹಿತ್ಯವಾಗಿದೆ. ವಿಷ್ಣುವಿನ ಒಂದೊಂದು ನಾಮಗಳ ಸತತ ಉಚ್ಛರಣೆಯಿಂದ ಬದುಕಿನಲ್ಲಿ ನೆಮ್ಮದಿ, ಶಾಂತಿ ಪ್ರಾಪ್ತವಾಗಲು ಸಾಧ್ಯವಿದೆ. ಎಂದು ಒಡಿಯೂರು ಶ್ರೀ ಗುರುದತ್ತ ಸಂಸ್ಥಾನದ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.

     ಅವರು ಒಡಿಯೂರು ಶ್ರೀ ಗುರುದೇವ ಜ್ಞಾನಮಂದಿರಲ್ಲಿ ಹಿರಿಯ ಸಾಹಿತಿ ಪ್ರೊ.ವಿ.ಬಿ.ಅರ್ತಿಕಜೆಯವರ ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರದ ಪದ್ಯಾನುವಾದ ಕೃತಿಯನ್ನು ಅನಾವರಣಗೊಳಿಸಿ ಆಶೀರ್ವಚನ ನೀಡುತ್ತಾ, 'ಬದುಕಿನ ಸಂಕಷ್ಟಗಳಿಗೆ ಭಗವನ್ನಾಮ ಸ್ಮರಣೆಯೊಂದೇ ದೀವಿಗೆ, ಎಂದರು.

ಪತ್ರಕರ್ತ, ಲೇಖಕ ನಾ. ಕಾರಂತ ಪೆರಾಜೆಯವರು ಕೃತಿಯ ಕುರಿತು ಮಾತನಾಡುತ್ತಾ, ಯಾವುದೇ ಶ್ಲೋಕ ಪಠಣಕ್ಕಿಂತ ಮೊದಲು ಅವುಗಳ ಅರ್ಥಗಳನ್ನು ತಿಳಿದು ಮನನಿಸಿಕೊಳ್ಳಬೇಕು. ಹಿನ್ನೆಲೆಯಲ್ಲಿ ಅರ್ತಿಕಜೆಯವರ ಪದ್ಯಾನುವಾದ ಕೃತಿಯು ವಿಷ್ಣುವಿನ ಸಾವಿರ ನಾಮಗಳನ್ನು ಸುಲಭದಲ್ಲಿ ಪದ್ಯರೂಪದಲ್ಲಿ ತಿಳಿಸುತ್ತದೆ, ಎಂದರು.

ಸಂದರ್ಭದಲ್ಲಿ ಅರ್ತಿಕಜೆಯವರ 78ನೇ ಹುಟ್ಟುಹಬ್ಬವೂ, ಪುಸ್ತಕ ಬಿಡುಗಡೆಯೂ ಒಂದೇ ದಿನ ಮಿಳಿತವಾಗಿದ್ದು, ಪೂಜ್ಯ ಒಡಿಯೂರು ಶ್ರೀಗಳು ಪ್ರೊ.ವಿ.ಬಿ.ಅರ್ತಿಕಜೆ ಹಾಗೂ ಭಾಗ್ಯಲಕ್ಷ್ಮೀ ದಂಪತಿಯನ್ನು ಗೌರವಿಸಿದರು. ವೇದಿಕೆಯಲ್ಲಿ ಸಾಧ್ವೀ ಶ್ರೀ ಮಾತಾನಂದಮಯೀ ದಿವ್ಯಸಾನ್ನಿಧ್ಯ ವಹಿಸಿದ್ದರು.

ಪತ್ರಕರ್ತ ಯಶವಂತ ವಿಟ್ಲ ನಿರ್ವಹಿಸಿದರು. ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಸೇರಾಜೆ ಗಣಪತಿ ಭಟ್ ವಂದಿಸಿದರು. ಶ್ರೀ ವಿಷ್ಣುಸಹಸ್ರನಾಮ ಪದ್ಯಾನುವಾದ ಕೃತಿಯ ಪ್ರಕಾಶಕ ಪ್ರಕಾಶ್ ಕುಮಾರ್ ಕೊಡೆಂಕಿರಿ ಉಪಸ್ಥಿತರಿದ್ದರು. ಸರಕಾರದ ಮಾರ್ಗಸೂಚಿಯನ್ವಯ ಸೀಮಿತ ಪ್ರೇಕ್ಷಕರ ಸಮಕ್ಷಮ ಕಾರ್ಯಕ್ರಮ ಸಂಪನ್ನವಾಗಿತ್ತು.  

No comments:

Post a Comment