ಮಂಗಳೂರು ವಿಶ್ವವಿದ್ಯಾನಿಲಯದ ಯಕ್ಷಗಾನ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಯಕ್ಷಮಂಗಳ ಪ್ರಶಸ್ತಿ ಪ್ರದಾನ ಸಮಾರಂಭ. ಹಿರಿಯ ಕಲಾವಿದರಾದ ಮತ್ಯಾಡಿ ನರಸಿಂಹ ಶೆಟ್ಟಿ, ಪಾತಾಳ ವೆಂಕಟ್ರಮಣ ಭಟ್, ಪೆರುವೋಡಿ ನಾರಾಯಣ ಭಟ್ – ಇವರಿಗೆ ಯಕ್ಷಮಂಗಳ ಪ್ರಶಸ್ತಿ. ಈ ಮೂವರು ಹಿರಿಯರ ಕಲಾ ಯಾನಕ್ಕೆ ಕನ್ನಡಿ ಹಿಡಿಯುವ ಅವಕಾಶ ಪ್ರಾಪ್ತವಾಗಿತ್ತು. ಒಂದು ಹೊಸ ಅನುಭವ.
(ಈ ಕಾರ್ಯಕ್ರಮದ ಬಳಿಕ ಒಬ್ಬರು ಕೇಳಿಬಿಟ್ಟರು..... ‘ನಿಮಗೆ ಹೇಗೆ ಆವಕಾಶ ಸಿಕ್ಕಿತು?’.... ಅವರ ಪ್ರಶ್ನೆ ಅರ್ಥವಾಗಲಿಲ್ಲ... ಕೊನೆಗೆ ತಿಳಿಯಿತು.... ನನ್ನ ಹೆಸರಿನ ಹಿಂದೆ ‘ಡಾ.’ ವಿಶೇಷಣ ಇದ್ದಿರಲಿಲ್ಲ ಅಲ್ವಾ.... ಹೊಟ್ಟೆಯ ಸಂಕಟವನ್ನು ಹೊರ ಹಾಕುವ ಹೊಸ ವಿಧಾನ!)
No comments:
Post a Comment