ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ ನಾ. ಕಾರಂತ ಪೆರಾಜೆ ಇವರನ್ನು ದೇಸಿ ಭತ್ತದ ಬೀಜ ಹಾಗೂ ಸಂಸ್ಕ್ಕೃತಿಯನ್ನು ಉಳಿಸಿ ಬೆಳೆಸುವ ವಿಚಾರಗಳನ್ನು ಮಾಧ್ಯಮಗಳಲ್ಲಿ ಬೆಳಕು ಬೀರಿರುವ ಶ್ರಮವನ್ನು ಶ್ಲಾಘಿಸಿ ಬೆಂಗಳೂರಿನಲ್ಲಿ ಜರುಗಿದ 'ಭತ್ತ ಉತ್ಸವದಲ್ಲಿ ಗೌರವಿಸಲಾಯಿತು.
ರಾಜ್ಯ ಸರಕಾರದ ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಹರತಾಳು ಹಾಲಪ್ಪ ಇವರ ಉಪಸ್ಥಿತಿಯಲ್ಲಿ ಮಾಜಿ ಸಚಿವೆ ಕು: ಶೋಭಾ ಕರಂದ್ಲಾಜೆಯವರು ಸ್ಮರಣಿಕೆ, ಪುರಸ್ಕಾರ ಕಥನ ಫಲಕವನ್ನು ನೀಡಿ ಗೌರವಿಸಿದರು.
ಎಲೆ ಮರೆಯ ಕಾಯಿಯಂತಿದ್ದ ಅನೇಕ ಸಾವಯವ ಕೃಷಿಕರು ಮತ್ತು ಬೀಜಸಂರಕ್ಷರನ್ನು ಮುಖ್ಯವಾಹಿನಿಗೆ ಪರಿಚಯಿಸಿದ ನಾ. ಕಾರಂತರೂ ಸೇರಿದಂತೆ ರಾಜ್ಯದ ಏಳು ಮಂದಿ ಕೃಷಿ ಮತ್ತು ಗ್ರಾಮೀಣ ಪತ್ರಕರ್ತರಿಗೆ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಗಿತ್ತು.
ಬೆಂಗಳೂರಿನ 'ಸಹಜ ಸಮೃದ್ಧ', 'ಭತ್ತ ಉಳಿಸಿ ಆಂದೋಳನ', ತಮಿಳುನಾಡಿದ 'ತನೆಲ್' ಮತ್ತು 'ಯೋರಾ' ಸಂಸ್ಥೆಗಳು ಕಾರ್ಯಕ್ರಮವನ್ನು ಆಯೋಜಿಸಿತ್ತು. ಸಹಜ ಸಮೃದ್ಧದ ಅಧ್ಯಕ್ಷ ಎನ್.ಆರ್.ಶೆಟ್ಟಿ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ನಿರ್ದೇಶಕ ಜಿ.ಕೃಷ್ಣಪ್ರಸಾದ್ ಕಾರ್ಯಕ್ರಮವನ್ನು ಸಂಘಟಿಸಿದ್ದರು.
ನಾ ಕಾರಂತರಿಗೆ ಶುಭಾಶಯಗಳು.......ತಮ್ಮನ್ನು ಗೌರವಿಸುವ ಮೂಲಕ "ಭತ್ತ ಉತ್ಸವ" ತನ್ನ ಗೌರವವನ್ನು ಹೆಚ್ಚಿಸಿಕೊಂಡಿತು.
ReplyDelete