ಸುಳ್ಯದ ಲಯನ್ಸ್ ಸಭಾಭವನದಲ್ಲಿ (11-7-2012) ಪತ್ರಿಕಾ ದಿನಾಚರಣೆ. ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ(ರಿ)ದ ಸಾರಥ್ಯ. ಸಂಘದ ಅಧ್ಯಕ್ಷ, ಉದಯವಾಣಿಯ ವರದಿಗಾರರಾದ ಶ್ರೀ ಗಂಗಾಧರ ಮಟ್ಟಿಯವರ ಅಧ್ಯಕ್ಷತೆ. ಮಂಗಳೂರು ಪ್ರಜಾವಾಣಿಯ ಬ್ಯೂರೋ ಚೀಫ್ ಶ್ರಿ ಬಾಲಕೃಷ್ಣ ಪುತ್ತಿಗೆಯವರಿಂದ ದೀಪಜ್ವಲನ ಮತ್ತು ಉಪನ್ಯಾಸ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಶ್ರೀ ಉಮಾನಾಥ ಎ. ಕೋಟ್ಯಾನ್, ಕರ್ನಾಟಕ ಅರೆಭಾಷೆ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಅಧ್ಯಕ್ಷ ಶ್ರೀ ಎನ್.ಎಸ್.ದೇವಿಪ್ರಸಾದರಿಂದ 'ಭಾಷೆಗಳ ಔಚಿತ್ಯ’ದ ಕುರಿತು ಮಾತುಕತೆ. ದಕ್ಷಿಣ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಗ್ರಾಮಾಂತರ ಕಾರ್ಯದರ್ಶಿ ಶ್ರೀ ಹರೀಶ್ ಬಂಟ್ವಾಳ ಮತ್ತು ಹಿರಿಯ ಪತ್ರಕರ್ತ ಶ್ರೀ ಮಲಾರು ಜಯರಾಮ ರೈ, ಸುಳ್ಯ ಪತ್ರಕರ್ತರ ಸಂಘದ ಖಜಾಂಜಿ ಶ್ರೀ ಗಿರೀಶ್ ಅಡ್ಪಂಗಾಯ ವೇದಿಕೆಯಲ್ಲಿ ಉಪಸ್ಥಿತಿ. ನಾ. ಕಾರಂತರಿಗೆ ಸಂಮಾನ. ಜಯಪ್ರಕಾಶ್ ಕುಕ್ಕೆಟ್ಟಿಯವರಿಂದ ಅಭಿನಂದನಾ ನುಡಿ. ಶ್ರೀ ದುರ್ಗಾಕುಮಾರ್ ನಾಯರಕೆರೆ ಪ್ರಸ್ತಾವನೆ, ಶ್ರೀ ಚೇತನರಾಂ ಇರಂತಕಜೆಯವರಿಂದ ಸ್ವಾಗತ, ಶ್ರೀ ಲೋಕೇಶ್ ಪೆರ್ಲಂಪಾಡಿ ನಿರೂಪಣೆ. ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಸಂವಾದ.
Wednesday, July 11, 2012
Subscribe to:
Posts (Atom)