Tuesday, August 18, 2020

ಜೀವಧಾನ್ಯ – ಅನಾವರಣ

2020 ಜನವರಿ 4ರಂದು ಪುತ್ತೂರಿನ ನಟರಾಜ ವೇದಿಕೆಯಲ್ಲಿ ಜರುಗಿದ ‘ಸಾವಯವ ಹಬ್ಬ’ದಲ್ಲಿ ಜೀವಧಾನ್ಯ ಪುಸ್ತಕದ ಅನಾವರಣ.... ಸಾವಯವ ಕೃಷಿ ಮಿಶನ್ನಿನ ಅಧ್ಯಕ್ಷ ಆ.ಶ್ರೀ.ಆನಂದ ಇವರು ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು... ನವಚೇತನ ಸ್ನೇಹ ಸಂಗಮ, ಜೇಸೀ ಪುತ್ತೂರು ಇವರ ಜಂಟಿ ಆಯೋಜನೆ... ಬಿಡುಗಡೆಯಂದು ಆನಂದರು ಐವತ್ತು ಪುಸ್ತಕಗಳನ್ನೂ ಖರೀದಿಸಿದ್ದರು.

 

Monday, August 17, 2020

ಅಕ್ಷರಯಾನ – ಅನಾವರಣ



ರಾಜೇಶ್ ಪವರ್ ಪ್ರೆಸ್ಸಿನ ಎಂ.ಎಸ್.ರಘುನಾಥ ರಾವ್ ಅವರ ವೃತ್ತಿ ಬದುಕಿನ ಕಥನ.... 

ಪುಸ್ತಕವು ಕೊರೋನಾ ಕಾಲದ ಶ್ರಮದ ಪ್ರತೀಕ! 

10-7-2020ರಂದು ಅನಾವರಣ....

 ಸವಣೂರು ಸೀತಾರಾಮ ರೈ ಇವರು ಅಕ್ಷರ ಯಾನವನ್ನು ಬಿಡುಗಡೆಗೊಳಿಸಿದರು.....

 

V4 ಚಾನೆಲ್ – ತಾಳಮದ್ದಳೆ ರೆಕಾರ್ಡಿಂಗ್ 9-8-2020

ಮಂಗಳೂರಿನ V4 ಚಾನೆಲ್ – ತಾಳಮದ್ದಳೆ ರೆಕಾರ್ಡಿಂಗ್. ಭಾಗವತ ರಾಜಾರಾಂ ಹೊಳ್ಳರ ಸಾರಥ್ಯ... ಪ್ರಸಂಗ ಭ್ರುಗು ಶಾಪ...

 ಕಲಾವಿದರು : ರಾಜಾರಾಮ ಹೊಳ್ಳ, ಧೀರಜ್ ರೈ ಸಂಪಾಜೆ (ಭಾಗವತರು), ಪ್ರಶಾಂತ ವಗೆನಾಡು (ಮದ್ದಳೆ), ಮುರಾರಿ ಕಡಂಬಳಿತ್ತಾಯ (ಚೆಂಡೆ); ಕನ್ನಡಿಕಟ್ಟೆ ಗಣೇಶ ಶೆಟ್ಟಿ (ದೇವೆಂದ್ರ), ನಾ. ಕಾರಂತ ಪೆರಾಜೆ (ಖ್ಯಾತಿ), ಜಯಪ್ರಕಾಶ್ ಶೆಟ್ಟಿ ಪೆರ್ಮುದೆ (ವಿಷ್ಣು), ಕಾವಳಕಟ್ಟೆ ದಿನೇಶ್ ಶೆಟ್ಟಿ (ಭ್ರುಗು).... ತುಂಬಾ ಚೆನ್ನಾಗಿ ಮುದ ನೀಡಿದ ತಾಳಮದ್ದಳೆ.

 (ಮಧ್ಯಂತರ ವಿರಾಮದಲ್ಲಿ ತೆಗೆದ ಚಿತ್ರ)

 

ಇರ್ದೆ ಗೋಪಾಲ ಕ್ಷೇತ್ರದಲ್ಲಿ ತಾಳಮದ್ದಳೆ -2018

ಪುತ್ತೂರು ತಾಲೂಕು ಇರ್ದೆ ಶ್ರೀ ಗೋಪಾಲ ಕ್ಷೇತ್ರದಲ್ಲಿ ‘ಚಕ್ರಗ್ರಹಣ’ ತಾಳಮದ್ದಳೆ.... ನಡುವಡ್ಕ ನಾಗರಾಜ ಭಟ್ಟರ ಆಯೋಜನೆ.. ನವರಾತ್ರಿ ಸಂದರ್ಭ... 

ಕಲಾವಿದರು  : ಪಟ್ಲ ಸತೀಶ ಶೆಟ್ಟಿ, ಜಗನ್ನಿವಾಸ ರಾವ್ ಪಿ.ಜಿ., ಕೃಷ್ಣ ಪ್ರಕಾಶ್ ಉಳಿತ್ತಾಯ (ಹಿಮ್ಮೇಳ), ಉಜಿರೆ ಅಶೋಕ ಭಟ್, ಪೆರ್ಮು‍ದೆ ಜಯಪ್ರಕಾಶ್ ಶೆಟ್ಟಿ, ವಾಸುದೇವ ರಂಗಾಭಟ್, ನಾ. ಕಾರಂತ ಪೆರಾಜೆ... (ಅರ್ಥದಾರಿಗಳು).... 

ಕಿಕ್ಕಿರಿದ ಪ್ರೇಕ್ಷಕರು... ವ್ಯಾಪಕ ಪ್ರಶಂಸೆ...

 

ರಾಮಭಟ್ಟರೊಂದಿಗೆ.... 25-12-2018

ಪುತ್ತೂರು ನಗರ ಸಭೆಯ  ಕೊಂಬೆಟ್ಟು ವಾರ್ಡಿನಲ್ಲಿ ಹಿರಿಯ ನಾಗರಿಕರಿಗೆ ಗೌರವ. 

ಕೊಂಬೆಟ್ಟು ವಾರ್ಡಿನ ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಇವರ ಆಯೋಜನೆ... 

ಮರಾಠಿ ಭವನದಲ್ಲಿ ಸಮಾರಂಭ... 

ಮಾಜಿ ಎಂ.ಎಲ್.ಎ. ಹಾಗೂ ಸಹೃದಯಿ ಉರಿಮಜಲು ರಾಮ ಭಟ್ಟರಿಗೆ ಅವರ ಮನೆಯಲ್ಲಿ ಗೌರವಾರ್ಪಣೆಯ ಸಂದರ್ಭ. 2019

 

ಸುಳ್ಯ ರಂಗಮನೆಯಲ್ಲಿ ಚಿಣ್ಣರ ಮೇಳ - 2015

ಸುಳ್ಯದ ಸಾಂಸ್ಕೃತಿಕ ತಾಣ ‘ಚಿಣ್ಣರ ಮನೆ’. ಜೀವನ ರಾಂ ಸುಳ್ಯ ಇವರ ಕನಸು.

 2015ರಲ್ಲಿ ಜರುಗಿದ ಚಿಣ್ಣರ ಮೇಳದಲ್ಲಿ ಮುಖ್ಯ ಅತಿಥಿಯಾದ ಸಂದರ್ಭ.