Sunday, February 7, 2010

ಬುಕ್ ಟಾಕ್

ಪತ್ರಕರ್ತನೊಬ್ಬನಿಗೆ ಪಾಸಿಟಿವ್ ನೋಟವಿದ್ದರೆ ಆಗುವ ಲಾಭಕ್ಕೆ 'ಕಾಡು ಮಾವು' ಒಳ್ಳೆಯ ಉದಾಹರಣೆ. ಅಡಿಕೆ ಪತ್ರಿಕೆ ಸದ್ದಿಲ್ಲದೆ ಸಮಾಜಮುಖಿ ಸೇವೆಗೆ ನಿಂತಿದೆ.

ಈ ಪತ್ರಿಕೆಯ ಸಹಾಯಕ ಸಂಪಾದಕ ನಾ. ಕಾರಂತ ಪೆರಾಜೆ. ನಾಡಿನ ಉದ್ದಗಲಕ್ಕೂ ಸುತ್ತಾಡಿದ ಇವರು ಯಶಸ್ಸು ಗಳಿಸಿ ಮಾದರಿಯಾದ ರೈತರ ಬಗ್ಗೆ ಬರೆದಿದ್ದಾರೆ. ಆ ಬರೆಹಗಳ ಸಂಕಲನವೇ - ಕಾಡು ಮಾವು.

’ಕಾರಂತರು ಪತ್ರಿಕೋದ್ಯಮದ ಒಳ ಹೊರಗು ಬಲ್ಲವರು. ಅದಕ್ಕೆ ಇಲ್ಲಿರುವ ಲೇಖನಗಳೇ ಸಾಕ್ಷಿ ಎನ್ನುತ್ತಾರೆ’ ಮುನ್ನುಡಿಯಲ್ಲಿ ಶಿವರಾಂ ಪೈಲೂರು. ಪುತ್ತೂರಿನ ಕೊಡೆಂಕಿರಿ ಪ್ರಕಾಶನ ಈ ಕೃತಿ ಪ್ರಕಟಿಸಿದೆ.

(ಫೆ. 6, 2010 - ವಿಜಯಕರ್ನಾಟಕದ 'ಮೀಡಿಯಾ ಮಿರ್ಚಿ ಅಂಕಣದಲ್ಲಿ ಜಿ.ಎನ್.ಮೋಹನ್ ಅವರು ಪುಸ್ತಕದ ಕುರಿತು ಬರೆದ ಒಳ್ಳೆಯ ಮಾತು. ಮೋಹನ್ ಅವರಿಗೆ ಕೃತಜ್ಞತೆಗಳು)

Tuesday, January 26, 2010

ಇಷ್ಟವಾಗುವ 'ಕಾಡು ಮಾವು'

(ಜನವರಿ 21, 2010 ಗುರುವಾರದ ಪ್ರಜಾವಾಣಿಯ ಕೃಷಿ ಪುರವಣಿಯಲ್ಲಿ ಪ್ರಕಟವಾದ ’ಪುಸ್ತಕ ಪರಿಚಯ’ ಬರೆಹ)

ಮೂರು ವರ್ಷಗಳ ಅವಧಿಯಲ್ಲಿ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಇಪ್ಪತ್ತೇಳು ಕೃಷಿ ಸಂಬಂಧಿ ಲೇಖನಗಳನ್ನು ನಾ. ಕಾರಂತ ಪೆರಾಜೆ 'ಕಾಡು ಮಾವು' ಹೆಸರಿನಲ್ಲಿ ಪ್ರಕಟಿಸಿದ್ದಾರೆ. 'ಬೇಸಾಯ ಲಾಭದಾಯಕವಲ್ಲ' ಎಂಬ ಮಾತು ಹೆಚ್ಚಾಗಿ ಕೇಳಿ ಬರುತ್ತಿರುವ ಈ ಸಂದರ್ಭದಲ್ಲಿ ಎಲೆ ಮರೆಯ ಕಾಯಿಗಳಂತೆ ಬೇಸಾಯ ಹಾಗೂ ಅದರ ಪೂರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಯಶಸ್ವಿಯಾದ ರೈತರ ಯಶೋಗಾಥೆಗಳನ್ನು ಅವರು ಗುರುತಿಸಿ ದಾಖಲಿಸಿದ್ದಾರೆ.

ಲೇಖಕರಿಗೆ ಕೃಷಿ ಹಾಗೂ ಅದರ ಪೂರಕ ಚಟುವಟಿಕೆಗಳಲ್ಲಿ ಅಪಾರ ಆಸಕ್ತಿ ಇದೆ. ಕೃಷಿ, ತೋಟಗಾರಿಕೆ, ಜೇನುಸಾಕಣೆ ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿ ಯಶಸ್ವಿಯಾದವರನ್ನು ಗುರುತಿಸಿ ಅವರ ಸಾಹಸ, ಸಾಧನೆಗಳನ್ನು ಇತರರಿಗೆ ಪರಿಚಯಿಸಬೇಕು ಎಂಬ ಆಸಕ್ತಿಯೂ ಇದೆ.


ಜೇನು ಸಾಕಣೆಯಲ್ಲಿ ಯಶಸ್ವಿಯಾದ ಧರ್ಮೇಂದ್ರ ಹೆಗಡೆ, ಹಲಸಿನ ಹಣ್ಣು-ಕಾಯಿಗಳಿಂದ ಹಪ್ಪಳ, ಚಿಪ್ಸ್ ಮತ್ತಿತರ ಉತ್ಪನ್ನಗಳನ್ನು ಮಾಡುವಲ್ಲಿ ಯಶಸ್ವಿಯಾದ ಶಿರಸಿಯ ಎರಡು ರೈತಕುಟುಂಬಗಳು, ನೂರಕ್ಕೂ ಮಿಕ್ಕಿ ಕಾಡುಮಾವಿನ ತಳಿಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸಿದ ಮಾಪಲ್ತೋಟದ ಸುಬ್ರಾಯ ಭಟ್, ಸಾವಯವ ಪದ್ದತಿಯಲ್ಲಿ ರಾಜಮುಡಿ ಭತ್ತ ಬೆಳೆದ ಹೊಳೆನರಸಿಪುರ ತಾಲೂಕಿನ ಉಣ್ಣೇನಹಳ್ಳಿಯ ರೈತ ಹೊಯ್ಸಳ ಎಸ್. ಅಪ್ಪಾಜಿ, ಬೆಂಗಳೂರು ಸಮೀಪದ ನೆಲಮಂಗಲದ ಬಳಿ ಒಂದೂಕಾಲೆಕರೆಯಲ್ಲಿ ಸಾವಯವ ಕೃಷಿಯಲ್ಲಿ ತೊಡಗಿರುವ ನಿವೃತ್ತ ಬಿಎಸ್ಎನ್ಎಲ್ ಅಧಿಕಾರಿ ಎನ್.ಆರ್.ಶೆಟ್ಟಿ ದಂಪತಿ.. ಹೀಗೆ ಹಲವಾರು ಯಶಸ್ವಿ ರೈತರ ಬಗ್ಗೆ ಬರೆದ ಲೇಖನಗಳು ನಮ್ಮ ರೈತ ಸಮುದಾಯಕ್ಕೆ ಮಾದರಿ ಆಗಬಲ್ಲವು.


ಈ ಲೇಖನಗಳೆಲ್ಲಾ ಸುಲಭವಾಗಿ ಓದಿಸಿಕೊಳ್ಳುತ್ತವೆ. ಸಾಮಾನ್ಯ ಕನ್ನಡ ಜ್ಞಾನ ಇರುವವರಿಗೂ ಅರ್ಥವಾಗುತ್ತದೆ. ಈ ಕಾರಣಕ್ಕೆ 'ಕಾಡು ಮಾವು' ಇಷ್ಟವಾಗುತ್ತದೆ.
- ಪಿ.ಕೆ.

Saturday, January 16, 2010

ಕಾಡುವ ನೆನಪು

ಕೀರ್ತಿಶೇಷ ಕೆರೆಮನೆ ಶಂಭು ಹೆಗಡೆ
ಕೀರ್ತಿಶೇಷ ವಿಟ್ಲ ಗೋಪಾಲಕೃಷ್ಣ ಜೋಯಿಸರು

ಕು.ಕರುಣಾ ಭರತನಾಟ್ಯ ರಂಗಪ್ರವೇಶ


ದಿನಾಂಕ 12-10-2008, ಪುತ್ತೂರಿನ 'ನಟರಾಜ ವೇದಿಕೆ'ಯಲ್ಲಿ
ಪುತ್ತೂರಮೂಲೆ ಮಹಾಬಲ ಭಟ್ಟರ ಪುತ್ರಿ
ಕು.ಕರುಣಾ ಅವರ ಭರತನಾಟ್ಯ ರಂಗಪ್ರವೇಶದ ಸಂದರ್ಭ

ಕಾಲದ ದಾಖಲೆ!

ಭಂಡಿಹೊಳೆ-ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರ ಯಕ್ಷಗಾನ ಸಂಘದ ಸಮಾರಂಭವೊಂದರಲ್ಲಿ -



'ತಳಿ ತಪಸ್ವಿ' ಪುಸ್ತಕದ ಅನಾವರಣ

ದಿನಾಂಕ 28-9-2005ರಂದು
ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್ ಆಶ್ರಯದಲ್ಲಿ
'ತಳಿ ತಪಸ್ವಿ' ಪುಸ್ತಕದ ಅನಾವರಣ

Tuesday, January 12, 2010

ಮಟ್ಟಿಯವರಿಗೆ ಸಂಮಾನ

ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ, ಸುಳ್ಯ ಇವರ ವತಿಯಿಂದ 11-10-2009ರಂದು ನೀರಬಿದಿರೆಯ ಡಾ.ಗಣೇಶ ಶರ್ಮಾ ಅವರ ಮನೆಯಲ್ಲಿ ಜರುಗಿದ ಸರಣಿ ಶಿವಪೂಜಾ ಸಮಾಪನಾ ಸಮಾರಂಭದಲ್ಲಿ
ಹಿರಿಯ ಪತ್ರಕರ್ತ ಗಂಗಾಧರ ಮಟ್ಟಿಯವರನ್ನು ಸಂಮಾನಿಸಿದಾಗ -
ದಿವ್ಯ ಉಪಸ್ಥಿತಿ : ಪರಮಪೂಜ್ಯ ನಿ.ಪ್ರ.ಸ್ವ.ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಅರಮೇರಿ ಮಠ, ವಿರಾಜಪೇಟೆ